Wednesday, February 22, 2017

Kannada translation of Bharatiyar's Achchamillai... Achchamillai...

Attempted a kannada translation of Subramanya Bharati's seminal Achchamillai achchamillai... please post your feedback... bi-lingual friends, will greatly appreciate your comparative feedback. Thanks to Ranjit Easwaran for helping with nuanced meanings of some difficult words and encouraging me to post this here...

ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ಅರಿಗೆ ಬೇಡ ಕರಿಗೆ ಬೇಡ ಹರಿಗೆ ಬೇಡ ಅಂಜಿಕೆ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ಮೂರುಲೋಕದಲ್ಲಿ ಎಲ್ಲ ಎದುರು ನೆಗೆದು ನಿಂತರೂ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ಹಳಿದು ಜರಿದು ತುಳಿಯಮಾಡಿ ಮುರಿಯಲೆಂದು ಬಂದರೂ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ಹರಕಲುಟ್ಟು ತಿರುಪೆ ಎತ್ತಿ ಬಾಳಬೇಽಕಾದರೂ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ಆಸೆಯಿಟ್ಟ ವಸ್ತುವೆಲ್ಲ ನುಚ್ಚು ನೂರು ಆದರೂ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ತುಂಬಿದೆದೆಯ ಮಾಟಗಾತಿ ಓರೆನೋಟ ಬೀರಲು
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ಆಪ್ತರೆಲ್ಲ ಒಂದು ಸೇರಿ ವಿಷವ ಬಾಯಿಗಿಟ್ಟರೂ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ರಕ್ತ ಹೀರೆ ಅಸುರ ಸೇನೆ ಮೈಯ ಮೇಲೆ ಬಿದ್ದರೂ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ಗುಡುಗು ಮಿಂಚು ಸಿಡಿಲಕಾರಿ ಗಗನ ಮೇಲೆ ಬಿದ್ದರೂ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
ರಟ್ಟೆ ಸಟೆದು ಎದೆಯ ಬಿಗಿದು ಎದ್ದು ನಿಂತು ನಿಲ್ಲೊಲೇ
ಅಂಜಬೇಡ ಅಂಜಬೇಡ ಅಂಜಬೇಡ ಬೇಡವೋ
--ರಾಮಾಂಜನೇಯ
ಡಿಸೆಂಬರ ೨೦೧೬

Note: I have added one line each in both the paragraphs that are not part of the original - that gave me a sense of completion in the current context. May the Mahakavi forgive me for the transgression.
#poetry #translations #mahakavibharati #bharatiyar #achchamillai #kannadatranslation #tamilpoetry
Image courtesy: portrait by V.N.O'key from Kamat's Potpourri site

No comments: